ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ, ಇದಕ್ಕೆ ಪ್ರಧಾನಮಂತ್ರಿ ಮೋದಿಯವರೇ ಚಾಲನೆ ನೀಡಿದ್ದರು: ಡಾ. ಜಿತೇಂದ್ರ ಸಿಂಗ್ North India Devika
ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ ಜಿತೇಂದ್ರ ಸಿಂಗ್ ಇಂದು ಹೇಳಿದರು, ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ. ‘ನಮಾಮಿ ಗಂಗಾ’ ಮಾದರಿಯಲ್ಲಿ 190 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪವಿತ್ರ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸಲು ಪ್ರತ್ಯೇಕವಾಗಿ ಕೈಗೊಂಡ ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಪರಿಶೀಲಿಸುವಾಗ ಇದನ್ನು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.