Site icon Kadak Suddi

ಉತ್ತರ ಭಾರತದ ಮೊದಲ ನದಿ ಪುನರುಜ್ಜೀವ ಯೋಜನೆ Devika

ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ, ಇದಕ್ಕೆ ಪ್ರಧಾನಮಂತ್ರಿ ಮೋದಿಯವರೇ ಚಾಲನೆ ನೀಡಿದ್ದರು: ಡಾ. ಜಿತೇಂದ್ರ ಸಿಂಗ್ North India Devika

ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ ಜಿತೇಂದ್ರ ಸಿಂಗ್ ಇಂದು ಹೇಳಿದರು, ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ. ‘ನಮಾಮಿ ಗಂಗಾ’ ಮಾದರಿಯಲ್ಲಿ 190 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪವಿತ್ರ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸಲು ಪ್ರತ್ಯೇಕವಾಗಿ ಕೈಗೊಂಡ ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಪರಿಶೀಲಿಸುವಾಗ ಇದನ್ನು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

 

ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಯ ಜೊತೆಗೆ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸುವ ಹಲವು ಅಂಶಗಳಿಂದ ಪ್ರಮುಖವಾದ ದೇವಿಕಾ ಪುನರುಜ್ಜೀವನ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಸಹ ನಿರ್ಮಿಸಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.

Source : PIB
Exit mobile version