ಇತ್ತೀಚಿನ ದಿನಗಳಲ್ಲಿ “ಕಿವಿ ಹಣ್ಣು” ತುಂಬಾ ಬಳಕೆಯಾಗುತ್ತಿದೆ. ಅದಕ್ಕೆ ಕಾರಣ ಅನಾರೋಗ್ಯದಿಂದ ನರಳುವವರಿಗೆ ಹಿಂದೆಲ್ಲಾ ಸೇಬು, ಮೂಸಂಬಿ, ಕಿತ್ತಳೆ ತಿನ್ನಿ ಅನ್ನುತ್ತಿದ್ದ ವೈದ್ಯರು ಈಗ ವಿಟಮಿನ್ ಸಿ ಮತ್ತು ಅಧಿಕ ಪೋಷಕಾಂಶವಿರುವ ನ್ಯೂಜಿಲೆಂಡ್ ಮೂಲದ “ಕಿವಿ ಹಣ್ಣು” ಬಳಸಲು ಸೂಚಿಸುತ್ತಿದ್ದಾರೆ..
ಅದರ ಬೆಲೆಯೋ ಮೂರು ಹಣ್ಣಿಗೆ ಕೆಲವೊಂದು ಕಡೆ 250/ರೂ ದಾಟಿದೆ. ಅಷ್ಟೊಂದು ದುಬಾರಿಯಾಗಿರುವ ಆ ಹಣ್ಣಿನಲ್ಲಿ ಅಂತಹ ವಿಶೇಷವಾದರೂ ಏನಿದೆ ಎಂದು ಅದರಲ್ಲಿರುವ ಜೀವಸತ್ವಗಳ ಸತ್ಯಾ ಸತ್ಯತೆಯನ್ನು ಪರೀಕ್ಷೆ ಮಾಡಿದೆ.
ವಿಟಮಿನ್ಗಳು, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್ಗಳ ಪ್ರಮಾಣ ನೋಡಿ ಪಿಚ್ಚೆನಿಸಿತು.
ಏಕೆಂದರೇ, ಬಡವರ ಸೇಬು “ಸೀಬೆ ಹಣ್ಣಿ”ನಲ್ಲಿ ಈ ಸೆಲೆಬ್ರಿಟಿ “ಕಿವಿ ಹಣ್ಣಿ”ಗಿಂತ ಅಧಿಕ ವಿಟಮಿನ್ ಮತ್ತು ಜೀವಸತ್ವಗಳ ಪೋಷಕಾಂಶಗಳಿವೆ.
100 ಗ್ರಾಂ “ಕಿವಿ ಹಣ್ಣು ಮತ್ತು ಸೀಬೆ ಹಣ್ಣಿ”ನಲ್ಲಿರುವ ಜೀವಸತ್ವಗಳು, ಪೋಷಕಾಂಶಗಳು ಇತರೆ ಎನಿದೆ,
ಒಮ್ಮೆ ನೀವೆ ನೋಡಿ..
ವಿಟಮಿನ್ ಸಿ
ಕಿವಿ 154%.
ಸೀಬೆ 380%
ವಿಟಮಿನ್ ಎ.
ಕಿವಿ 1%.
ಸೀಬೆ ಹಣ್ಣು 12%
ವಿಟಮಿನ್ ಬಿ6.
ಕಿವಿ 5%.
ಸೀಬೆ ಹಣ್ಣು 5%
ಪ್ರೋಟೀನ್.
ಕಿವಿ 2%.
ಸೀಬೆ ಹಣ್ಣು 5%
ಫೈಬರ್.
ಕಿವಿ 12%.
ಸೀಬೆ ಹಣ್ಣು 20%
ಪೊಟ್ಯಾಷಿಯಂ.
ಕಿವಿ 8%.
ಸೀಬೆ ಹಣ್ಣು 11%
ಕಾರ್ಬೋಹೈಡ್ರೇಟ್.
ಕಿವಿ 5%.
ಸೀಬೆ ಹಣ್ಣು 4%
ಮೆಗ್ನೀಷಿಯಂ.
ಕಿವಿ 4%.
ಸೀಬೆ ಹಣ್ಣು 5%
ಕ್ಯಾಲ್ಸಿಯಂ.
ಕಿವಿ 3%.
ಸೀಬೆ ಹಣ್ಣು 5%
ಐರನ್.
ಕಿವಿ 1%.
ಸೀಬೆ ಹಣ್ಣು 1%
ಕ್ಯಾಲರೀಸ್.
ಕಿವಿ 61%
ಸೀಬೆ ಹಣ್ಣು 68%
ಕಿವಿ ಹಣ್ಣಿಗಿಂತಲೂ ಹೇರಳ ವಿಟಮಿನ್, ಫೈಬರ್ ಇತ್ಯಾದಿ ಅಂಶಗಳಿದ್ದರೂ ಯಾವ ವೈದ್ಯರೂ ಕೂಡ ಸೀಬೆ ಹಣ್ಣುನ್ನು ಶಿಫಾರಸು ಮಾಡುವುದಿಲ್ಲ. ಮತ್ತು ಬಹುಶಃ ಕಡಿಮೆ ದರದಲ್ಲಿ ದೊರಕುವ ವಸ್ತುಗಳು ಕಡಿಮೆ ಗುಣ ಮಟ್ಟದ ಇರುತ್ತವೆಂಬ ಸಾರ್ವತ್ರಿಕ ನಂಬಿಕೆಯೋ? ಅಥವಾ ಬೀಜಗಳು ಹಲ್ಲಿನಲ್ಲಿ ಸಿಕ್ಕಿಕೊಳ್ಳುತ್ತವೆಂಬ ಕಾರಣವೋ? ಎಲ್ಲರೂ ಇಷ್ಟ ಪಟ್ಟು ತರುವ ಹಣ್ಣುಗಳ ಪಟ್ಟಿಯಲ್ಲಿ ಸೀಬೆ ಹಣ್ಣಿಗೆ ಜಾಗವಿರುವುದಿಲ್ಲ.
ಅದಕ್ಕೆ ಹಿರಿಯರು ಹೇಳಿದ್ದ ಮಾತು “ಹಿತ್ತಲ ಗಿಡ ಮದ್ದಲ್ಲ” ಎಂಬುದು ನಿಜ..
ಯಾರೇನೆ ಹೇಳಲಿ, ಪ್ರತಿ ದಿನ ಒಂದು “ಬಡವರ ಸೇಬು ಸೀಬೆ ಹಣ್ಣನ್ನು ತಿನ್ನಿ ಆರೋಗ್ಯವಾಗಿರಿ.
ನಮ್ಮ ರೈತರನ್ನು ಉಳಿಸಿ…